ವಿದ್ಯಾರ್ಥಿನಿ ಬ್ಯಾಗ್ನಿಂದ ಹೊರಬಂದ ಸರ್ಪ.. ವಿಡಿಯೋ ವೈರಲ್ - ಈಟಿವಿ ಭಾರತ್ ಕನ್ನಡ ಸುದ್ದಿ
ಶಿವಪುರಿ ಜಿಲ್ಲೆಯ ಗಡಿಭಾಗದಲ್ಲಿರುವ ಬದೌನಿಯ ಶಾಲೆಯಲ್ಲಿ ಆಘಾತಕಾರಿ ವಿಡಿಯೋವೊಂದು ಹೊರಬಿದ್ದಿದೆ. ಇಲ್ಲಿನ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಶಾಲೆಗೆ ಆಗಮಿಸಿ ಪುಸ್ತಕ ಹೊರತೆಗೆದಾಗ ಸರ್ಪವೊಂದು ಹೆಡೆಯನ್ನು ಚಾಚಿ ಹೊರಗೆ ಬಂದಿದೆ. ತಕ್ಷಣವೇ ಅದನ್ನು ಕಂಡು ವಿದ್ಯಾರ್ಥಿಗಳು ಹೌಹಾರಿದ್ದಾರೆ. ನಂತರ ಶಿಕ್ಷಕರು ಸರ್ಪವನ್ನು ಏಕಾಂತ ಸ್ಥಳದಲ್ಲಿ ಬಿಟ್ಟಿದ್ದಾರೆ. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ ಎಂಬುದು ತಿಳಿದುಬಂದಿದೆ.