ನೋಡಿ: 26 ವರ್ಷಗಳಿಂದ ಜನರ ದಾಹ ತಣಿಸುತ್ತಿರುವ 'ಜಬಲ್‌ಪುರದ ವಾಟರ್‌ಮ್ಯಾನ್'! - ಜಬಲ್‌ಪುರದ ವಾಟರ್‌ಮ್ಯಾನ್
ಜಬಲ್‌ಪುರ(ಮಧ್ಯಪ್ರದೇಶ): ಭಾರತೀಯ ಸಂಸ್ಕೃತಿಯಲ್ಲಿ ಬಾಯಾರಿದವರಿಗೆ ನೀರು ಕೊಡುವುದು ಅತ್ಯಂತ ಪುಣ್ಯದ ಕೆಲಸವೆಂದೇ ಪರಿಗಣಿಸಲಾಗಿದೆ. ಬೇಸಿಗೆಯ ಈ ಸಮಯದಲ್ಲಿ ಜಬಲ್‌ಪುರದ 68 ವರ್ಷದ ವ್ಯಕ್ತಿಯೋರ್ವರು ಸೈಕಲ್ ನಲ್ಲಿಯೇ ತಿರುಗಾಡಿ ಜನರಿಗೆ ಉಚಿತವಾಗಿ ಕುಡಿಯುವ ನೀರು ಒದಗಿಸುತ್ತಾರೆ. ಈ ಉದಾತ್ತ ಕೆಲಸವನ್ನು ಮಾಡುತ್ತಿರುವ 'ಶಂಕರಲಾಲ್ ಸೋನಿ' ಅವರನ್ನು ಜನ ಪ್ರೀತಿಯಿಂದ 'ವಾಟರ್‌ಮ್ಯಾನ್' ಎಂದು ಕರೆಯುವರು. ಇವರು ಕಳೆದ 26 ವರ್ಷಗಳಿಂದಲೂ ಜನರ ಬಾಯಾರಿಕೆ ನೀಗಿಸುವ ಜೊತೆಗೆ ಪ್ರತಿಯೊಬ್ಬರಿಗೂ ನೀರು ಉಳಿಸುವ ಸಂದೇಶ ನೀಡುತ್ತಿದ್ದಾರಂತೆ. ಇಳಿವಯಸ್ಸಿನಲ್ಲಿಯೂ ಇವರ ಸತ್ಕಾರ್ಯ ಶ್ಲಾಘನೀಯ.