ವರದಿಗಾರನಂತೆ ಶಾಲೆಯ ದುಃಸ್ಥಿತಿ ಬಯಲು ಮಾಡಿದ ವಿದ್ಯಾರ್ಥಿ: ವಿಡಿಯೋ ವೈರಲ್ - ಶಾಲೆಯ ದುಃಸ್ಥಿತಿ ಬಯಲು ಮಾಡಿದ ವಿದ್ಯಾರ್ಥಿ
ಮಾಧ್ಯಮಗಳ ಮೇಲೆ ಹರಿಹಾಯುವುದು ಈಗ ಸಹಜವಾಗಿದೆ. ಆದರೆ, ಎಂದಿಗೂ ಅದು ಹರಿತವಾದ ಕತ್ತಿ ಎಂಬುದು ಸಹಜ ಸತ್ಯ. ಜಾರ್ಖಂಡ್ನ ವಿದ್ಯಾರ್ಥಿಯೊಬ್ಬ ಮಾಧ್ಯಮ ವರದಿಗಾರನಂತೆ ತನ್ನ ಶಾಲೆಯ ದುಃಸ್ಥಿತಿಯನ್ನು ಬಯಲಿಗೆಳೆದಿದ್ದಾನೆ. ಶಾಲೆಯ ಅವ್ಯವಸ್ಥೆ ಬಗ್ಗೆ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದು ಭಾರಿ ವೈರಲ್ ಆಗಿದ್ದು, ಸರ್ಕಾರದ ಗಮನ ಸೆಳೆದಿದೆ. ತಕ್ಷಣವೇ ಶಿಕ್ಷಣ ಇಲಾಖೆ ಈ ಬಗ್ಗೆ ವರದಿ ಕೇಳಿದ್ದು, ಇಬ್ಬರು ಶಿಕ್ಷಕರನ್ನೂ ಅಮಾನತು ಮಾಡಲಾಗಿದೆ. ಶೌಚಾಲಯ, ಶಾಲೆಗೆ ಹೋಗಲು ದಾರಿ ಇಲ್ಲದೇ ಪರದಾಡುವ ಬಗ್ಗೆ ಮಕ್ಕಳ ಜೊತೆ ಆ ವಿದ್ಯಾರ್ಥಿ ಚಿಟ್ಚಾಟ್ ನಡೆಸಿದ್ದಾನೆ.
Last Updated : Aug 6, 2022, 6:31 PM IST