ಭಾರಿ ಪ್ರವಾಹ...ರಸ್ತೆಯಲ್ಲಿ ತೆರಳುತ್ತಿದ್ದ ಶಾಲಾ ಬಸ್ ಚರಂಡಿಯಲ್ಲಿ ಪಲ್ಟಿ! - ಚಂಪಾವತ್ ಜಿಲ್ಲೆಯ ಟನಕ್‌ಪುರದಲ್ಲಿರುವ ಕಿರೋಡಾ ಬರ್ಸಾತಿ ಚರಂಡಿಗೆ ಶಾಲಾ ಬಸ್ ಉರುಳಿದೆ
ಟನಕ್‌ಪುರ (ಉತ್ತರಾಖಂಡ್): ಚಂಪಾವತ್ ಜಿಲ್ಲೆಯ ಟನಕ್‌ಪುರದಲ್ಲಿರುವ ಕಿರೋಡಾ ಬರ್ಸಾತಿ ಚರಂಡಿಗೆ ಶಾಲಾ ಬಸ್ ಉರುಳಿರುವ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ. ಟನಕ್ಪುರದಿಂದ ಪೂರ್ಣಗಿರಿ ಮಾರ್ಗವಾಗಿ ಹೋಗುತ್ತಿದ್ದ ಶಾಲಾ ಬಸ್ ಕಿರೋಡಾ ಬರ್ಸಾತಿ ಚರಂಡಿಗೆ ಪಲ್ಟಿಯಾಗಿದೆ. ಅದೃಷ್ಟವಶಾತ್ ಈ ಬಸ್ನಲ್ಲಿ ಮಕ್ಕಳಿರಲಿಲ್ಲ.ಇದರಿಂದಾಗಿ ಸಂಭಾವ್ಯ ಅಪಘಾತವೊಂದು ತಪ್ಪಿದಂತಾಗಿದೆ. ಅಪಘಾತದ ವೇಳೆ ಚಾಲಕ ಮತ್ತು ಸಹಾಯಕ ಮಾತ್ರ ಬಸ್‌ನಲ್ಲಿದ್ದು, ಇಬ್ಬರೂ ಅದೃಷ್ಟವಶಾತ್ ಪಾರಾಗಿದ್ದಾರೆ. ಬಸ್ ಮಕ್ಕಳನ್ನು ಕರೆತರಲು ಟನಕ್ಪುರದಿಂದ ಪೂರ್ಣಗಿರಿಗೆ ಹೋಗುತ್ತಿತ್ತು ಎನ್ನಲಾಗಿದೆ.