ಎಸಿಬಿ ರಚನೆ ರದ್ದು: ಹೈಕೋರ್ಟ್ ನಡೆಗೆ ಸಂತೋಷ್ ಹೆಗ್ಡೆ ಹೇಳಿದ್ದೇನು?
ಬೆಂಗಳೂರು: ಎಸಿಬಿ ರಚನೆ ರದ್ದುಗೊಳಿಸಿ, ಇದುವರೆಗೂ ದಾಖಲಾಗಿದ್ದ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿರುವ ಹೈಕೋರ್ಟ್ ನಡೆಯನ್ನು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಸ್ವಾಗತಿಸಿದ್ದಾರೆ. "ಎಸಿಬಿ ರದ್ದುಗೊಳಿಸಿದ ಹೈಕೋರ್ಟ್ ಆದೇಶ ನನಗೆ ಬಹಳ ಸಂತೋಷ ತಂದಿದೆ. ಇದೊಂದು ಉತ್ತಮವಾದ ನಿರ್ಧಾರವಾಗಿದೆ. ಆದರೆ ಲೋಕಾಯುಕ್ತಕ್ಕೆ ಸರ್ಕಾರ ಅಧಿಕಾರ ನೀಡುವುದವರ ಜೊತೆಗೆ ಉತ್ತಮ ಅಧಿಕಾರಿಗಳನ್ನು ಕೂಡ ನೇಮಿಸಬೇಕು. ಸರ್ಕಾರ ತಮಗೆ ಬೇಕಾದ ಅಧಿಕಾರಿಗಳನ್ನು ನೇಮಿಸಬಾರದು. ಲೋಕಾಯುಕ್ತರೇ ತಮಗೆ ಬೇಕಾದ ಅಧಿಕಾರಿಗಳನ್ನ ನೇಮಕ ಮಾಡಿಕೊಳ್ಳಬೇಕು. ಹಾಗೆಯೇ ಲೋಕಾಯುಕ್ತರು ಕೊಟ್ಟ ಜವಾಬ್ದಾರಿ ಚೆನ್ನಾಗಿ ನಿರ್ವಹಿಸಬೇಕು. ಎಲ್ಲಾ ಅಧಿಕಾರ ಸೌಲಭ್ಯ ಕೊಟ್ಟ ಬಳಿಕ ಉತ್ತಮವಾಗಿ ನಿರ್ವಹಿಸಬೇಕು. ಇಲ್ಲವಾದರೆ ನಾನೇ ವಿರೋಧ ಮಾಡುತ್ತೇನೆ" ಎಂದಿದ್ದಾರೆ.