ಡ್ರಗ್ಸ್ ಪ್ರಕರಣ :ಆರೋಪಗಳೆಲ್ಲವೂ ಸುಳ್ಳು ಎಂದ ರಾಗಿಣಿ ತಾಯಿ.. ಟೈಂ ಕಮ್ಸ್ ಎಂದ ತಂದೆ! - ರಾಗಿಣಿ ದ್ವಿವೇದಿ ತಂದೆ ತಾಯಿ
ಬೆಂಗಳೂರು : ಸಿಸಿಬಿ ಬಂಧನದಲ್ಲಿರುವ ಮಗಳನ್ನು ನೋಡಲು ರಾಗಿಣಿ ತಂದೆ-ತಾಯಿ ಸಿಸಿಬಿ ಕಚೇರಿಗೆ ಆಗಮಿಸಿದ್ದರು. ಅದ್ರೆ ಹಿರಿಯ ಅಧಿಕಾರಿಗಳು ಕಚೇರಿಗೆ ಆಗಮಿಸಿದ್ದು ಬಿಟ್ಟರೆ ರಾಗಿಣಿಯನ್ನು ಇಲ್ಲಿಯವರೆಗೆ ಕರೆ ತಂದಿಲ್ಲ. ಈ ಸಂದರ್ಭದಲ್ಲಿ ಮಾತನಾಡಿದ ರಾಗಿಣಿ ತಾಯಿ ರೋಹಿಣಿ ದ್ವಿವೇದಿ, ಆಲ್ ಆರ್ ಪಾಲ್ಸ್ (all are false) ಆರೋಪಗಳೆಲ್ಲವೂ ಸುಳ್ಳು, ಎಲ್ಲದಕ್ಕೂ ಮಾತಾಡೋ ಟೈಂ ಬರುತ್ತೆ ಎಂದ್ರು. ರಾಗಿಣಿ ತಂದೆ ಮಾತನಾಡಿ ಟೈಂ ಕಮ್ಸ್ ಎಂದು ಉತ್ತರ ನೀಡಿ, ಮಗಳ ಭೇಟಿಗೆ ಅವಕಾಶ ಸಿಗದೆ ನಿರಾಸೆಯಿಂದ ಹೊರಟು ಹೋದರು.