ಮರಳಿನಲ್ಲಿ ಮುರ್ಮು ಕಲಾಕೃತಿ ಬಿಡಿಸಿ ವಿಶೇಷವಾಗಿ ಶುಭಕೋರಿದ ಕಲಾವಿದ ಪಟ್ನಾಯಕ್.. ವಿಡಿಯೋ - ಮರಳು ಕಲಾವಿದ ಸುದರ್ಶನ್ ಪಟ್ನಾಯಕ್
ಪುರಿ(ಒಡಿಶಾ) : ರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಅಭ್ಯರ್ಥಿಯಾದ ದ್ರೌಪದಿ ಮುರ್ಮು ಅವರಿಗೆ ಒಡಿಶಾದ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ವಿಶೇಷವಾಗಿ ಶುಭ ಕೋರಿದ್ದಾರೆ. ಪುರಿಯ ಕಡಲ ತೀರದಲ್ಲಿ ಮುರ್ಮು ಅವರ ಮರಳಿನ ಕಲಾಕೃತಿ ಬಿಡಿಸಿ, 'ಮೇರಾ ಭಾರತ್ ಮಹಾನ್, ದ್ರೌಪದಿ ಮುರ್ಮ ಅವರಿಗೆ ಶುಭವಾಗಲಿ' ಎಂದು ಕಲಾವಿದ ಪಟ್ನಾಯಕ್ ಆಶಿಸಿದ್ದಾರೆ. ಈ ಕಲಾಕೃತಿ ನೋಡಲು ಜನರು ಸಹ ಆಗಮಿಸಿದ್ದು, ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇನ್ನು, ಮುರ್ಮು ಮೂಲತಃ ಒಡಿಶಾದವರೇ ಆಗಿದ್ದು, ಇಂದು ನವದೆಹದಲ್ಲಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.