ಚಂದ್ರಶೇಖರ ಗುರೂಜಿ ಅಗಲಿಕೆಯಿಂದ ನೋವಾಗಿದೆ: ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ
ಹುಬ್ಬಳ್ಳಿ: ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರ ಅಗಲಿಕೆ ನೋವುಂಟು ಮಾಡಿದೆ ಎಂದು ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಹೇಳಿದರು. ಅವರು ಕಿಮ್ಸ್ ಶವಾಗಾರದ ಆವರಣದಲ್ಲಿ ಗುರೂಜಿ ಅವರ ಮೃತದೇಹಕ್ಕೆ ಪುಷ್ಪನಮನ ಸಲ್ಲಿಸಿದರು. ಅವರ ಕೊಲೆ ಖಂಡನೀಯ, ಅವರ ಗಅಲಿಕೆಯಿಂದ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಇಂತ ಕೃತ್ಯಗಳು ನಡೆಯಬಾರದು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ. ಸರ್ಕಾರ ಕೂಡಲೇ ಆರೋಪಿಗಳಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡಲಿದೆ. ಗುರೂಜಿಯನ್ನು ಹತ್ಯೆ ಮಾಡಿದ ನಾಲ್ಕು ಗಂಟೆಯಲ್ಲಿಯೇ ಪೊಲೀಸರು ಆರೋಪಿಗಳನ್ನು ಬಂಧಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.