ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಆರ್ಎಸ್ಎಸ್ನಿಂದ ಘೋಷ ವಾದ್ಯ, ನಿಯಮ ಉಲ್ಲಂಘನೆ ಆರೋಪ
ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಆರ್ಎಸ್ಎಸ್ ಕಾರ್ಯಕರ್ತರು ಡ್ರಂ ಬಾರಿಸಿ ಘೋಷ ವಾದ್ಯ ನುಡಿಸಿದರು. ಈ ಮೂಲಕ ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಿಯಮದ ಪ್ರಕಾರ, ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಗಣೇಶ ಮೂರ್ತಿ ಬಿಟ್ಟು ಬೇರೆ ಮೂರ್ತಿಗಳನ್ನು ಸ್ಥಳದಲ್ಲಿ ಇಡುವಂತೆಯೂ ಇಲ್ಲ. ಫೋಟೋ, ಫ್ಲೆಕ್ಸ್ ಅಳವಡಿಸುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ. ಆದರೆ ನಿನ್ನೆ ಸಾವರ್ಕರ್ ಫ್ಲೆಕ್ಸ್ ಮತ್ತು ಫೋಟೋವನ್ನು ಆಯೋಜಕರು ಹಾಕಿದ್ದರು. ಜೊತೆಗೆ, ಆರ್ಎಸ್ಎಸ್ ಕಾರ್ಯಕರ್ತರು ಘೋಷ ವಾದ್ಯವನ್ನೂ ನುಡಿಸಿದ್ದಾರೆ.