ರೊಟ್ಟಿ ತಟ್ಟುವ ಕೈಗಳಿಗೆ ಬಿಸಿ ಕೊಟ್ಟ ಕೊರೊನಾ: ಸಂಕಷ್ಟದಲ್ಲಿ ಸ್ವಾವಲಂಬಿ ಮಹಿಳೆಯರು
ಗುಮ್ಮಟನಗರಿ ಅಂದ್ರೆ ಸಾಕು ಖಡಕ್ ರೊಟ್ಟಿಯ ಜವಾರಿಯೂಟ ಫೇಮಸ್. ಹೊರಗೆ ದುಡಿಮೆಗೆ ಹೋಗದೆ 20ಕ್ಕೂ ಅಧಿಕ ಮಹಿಳೆಯರು ಪ್ರತಿದಿನ ಉಬ್ಬು ರೊಟ್ಟಿಗಳನ್ನ ತಟ್ಟಿ ಮಾರಾಟ ಮಾಡುತ್ತಿದ್ದರು. ಈಗ ಕೊರೊನಾ ಭೀತಿಯಿಂದ ರೊಟ್ಟಿ ಮಾರಾಟವಾಗದೆ, ಇತ್ತ ಸರಿಯಾಗಿ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕುವಂತಾಗಿದೆ. ಲಾಕ್ಡೌನ್ ಜಾರಿಯಾದ ಬಳಿಕ ಗುಮ್ಮಟ ನಗರಿಯಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ಪ್ರಸಿದ್ಧ ಪ್ರವಾಸಿ ತಾಣಗಳು ಖಾಲಿ ಹೊಡೆಯುತ್ತಿವೆ. ಅಲ್ಲದೆ ಪ್ರವಾಸಿಗರು ಹಾಗೂ ದುಡಿಮೆ ನಂಬಿ ಬದುಕು ನಡೆಸುತ್ತಿದ್ದ ಹತ್ತಾರು ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ.