ಬ್ಯಾಂಕ್ ಕ್ಯಾಶ್ ಕೌಂಟರ್‌ನಿಂದ 10 ಲಕ್ಷ ರೂಪಾಯಿ ಎಗರಿಸಿದ ಕಳ್ಳ! ಸಿಸಿಟಿವಿ ವಿಡಿಯೋ - ಹಗಲು ಹೊತ್ತಿನಲ್ಲೇ ಕಳ್ಳತನ
ಮಥುರಾ(ಉತ್ತರ ಪ್ರದೇಶ): ಇಲ್ಲಿನ ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿ ಹಗಲು ಹೊತ್ತಿನಲ್ಲೇ ಕಳ್ಳತನ ನಡೆದಿದೆ. ಕ್ಯಾಶ್ ಕೌಂಟರ್‌ನಿಂದ 10 ಲಕ್ಷ ರೂಪಾಯಿ ಎಗರಿಸಿರುವ ಖದೀಮ ಸ್ಥಳದಿಂದ ಪರಾರಿಯಾಗಿದ್ದಾನೆ. ಮಥುರಾದ ಜೈಂಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬ್ಯಾಂಕ್‌ನಲ್ಲಿ ಹೆಚ್ಚಿನ ಜನಸಂದಣಿ ಇತ್ತು. ಕ್ಯಾಶಿಯರ್ ಹರೀಶ್ ಯಾದವ್ ಬಾತ್ ರೂಮ್ಗೆ ಹೋಗಿದ್ದರು. ತಕ್ಷಣವೇ ಕ್ಯಾಶ್ ಕೌಂಟರ್ಗೆ ಲಗ್ಗೆ ಹಾಕಿರುವ ಕಳ್ಳ ನೋಟಿನ ಬಂಡಲ್ ಎತ್ತಿಕೊಂಡು ಕಾಲ್ಕಿತ್ತಿದ್ದಾನೆ. ಕೃತ್ಯದ ದೃಶ್ಯ ಬ್ಯಾಂಕ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.