ದತ್ತ ಪೀಠದಲ್ಲಿ ಭೂ ಕುಸಿತ: ಕುಸಿದ ರಸ್ತೆಯಲ್ಲೇ ಪ್ರವಾಸಿಗರ ವಾಹನ ಸಂಚಾರ - ವಾಹನ ಸಂಚಾರ ಬಂದ್
ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಪ್ರಸಿದ್ಧ ಪ್ರವಾಸಿತಾಣ ಚಂದ್ರದ್ರೋಣ ಪರ್ವತದಲ್ಲಿ ಭೂಕುಸಿತ ಉಂಟಾಗಿದೆ. ಚಿಕ್ಕಮಗಳೂರು-ಇನಾಂ ದತ್ತಾತ್ರೇಯ ಪೀಠದ ರಸ್ತೆಯ ಗುಡ್ಡದ ತಿರುವಿನಲ್ಲಿ ಎರಡು ಅಡಿ ರಸ್ತೆ ಕುಸಿದಿದೆ. ಹೀಗಾಗಿ, ವಾಹನ ಸಂಚಾರ ಬಂದ್ ಆಗುವ ಸಾಧ್ಯತೆ ಕಾಣುತ್ತಿದ್ದು, ದಿನನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕುಸಿದ ರಸ್ತೆಯಲ್ಲೇ ಪ್ರವಾಸಿಗರ ವಾಹನ ಸಂಚರಿಸುತ್ತಿದ್ದು, ಆತಂಕ ಹೆಚ್ಚಿಸಿದೆ.