ಕರ್ನಾಟಕ

karnataka

ETV Bharat / videos

ವಿಡಿಯೋ: ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ.. ಕಂಬಕ್ಕೆ ಕಟ್ಟಿ ಯುವಕನಿಗೆ ಥಳಿಸಿದ ಗ್ರಾಮಸ್ಥರು - ಯುವತಿಗೆ ಕಿರುಕುಳ ನೀಡಿರುವ ಆರೋಪ

By

Published : May 24, 2022, 8:26 PM IST

ರೇವಾ(ಮಧ್ಯಪ್ರದೇಶ): ಯುವತಿಯೊಬ್ಬಳಿಗೆ ಪ್ರೀತಿಯ ಆಮಿಷವೊಡ್ಡಿ, ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಯುವಕನೊಬ್ಬನನ್ನು ಅಮಾನವೀಯ ರೀತಿ ಥಳಿಸಲಾಗಿದೆ. ಮಧ್ಯಪ್ರದೇಶದ ರೇವಾದ ಲಾರ್​ ಪೊಲೀಸ್ ಠಾಣಾ ವ್ಯಾಪ್ತಿಯ ದೌಲತ್​ ನಗರದಲ್ಲಿ ಈ ಘಟನೆ ನಡೆದಿದೆ. ಮರಕ್ಕೆ ಯುವಕನನ್ನ ಕಟ್ಟಿ ಹಾಕಲಾಗಿದ್ದು, ಆತನಿಗೆ ಮಹಿಳೆಯರು ಸೇರಿದಂತೆ ಅನೇಕರು ಥಳಿಸಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ದೌಲತ್ ನಗರದ ಯುವಕನೊಬ್ಬ ಅದೇ ಗ್ರಾಮದ ಯುವತಿಗೆ ಆಮಿಷವೊಡ್ಡಿ ಬೇರೆಡೆ ಕರೆದುಕೊಂಡು ಹೋಗುತ್ತಿದ್ದನು. ಈ ವೇಳೆ, ಯುವತಿಯ ಸಹೋದರ ಆತನನ್ನ ಹಿಡಿದು, ಗ್ರಾಮಕ್ಕೆ ಕರೆತಂದು ಮರಕ್ಕೆ ಕಟ್ಟಿ ಹಾಕಿದ್ದಾನೆ. ಇದರ ಬೆನ್ನಲ್ಲೇ ತೀವ್ರವಾಗಿ ಥಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ABOUT THE AUTHOR

...view details