ಭಾರಿ ಮಳೆಗೆ ಜಲಾವೃತಗೊಂಡ ಆಸ್ಪತ್ರೆ.. ಮಕ್ಕಳು ಹಾಗೂ ರೋಗಿಗಳ ರಕ್ಷಿಸಿದ ಪೊಲೀಸರು! - ಗುಜರಾತ್ ಮಳೆ
ಅಹಮದಾಬಾದ್(ಗುಜರಾತ್): ರಣಭೀಕರ ಮಳೆಗೆ ಗುಜರಾತ್ ಅಕ್ಷರಶಃ ತತ್ತರಿಸಿ ಹೋಗಿದೆ. ಬಹುತೇಕ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿರುವ ಕಾರಣ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಇದರ ಮಧ್ಯೆ ಸರಸ್ಪುರ ಪ್ರದೇಶದ ಶಾರದಾಬೆನ್ ಆಸ್ಪತ್ರೆ ಮಳೆಯಿಂದಾಗಿ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಹೀಗಾಗಿ, ಚಿಕಿತ್ಸೆಗೆಂದು ಬಂದ ಅನೇಕರು ಅಲ್ಲೇ ಸಿಕ್ಕಿಹಾಕಿಕೊಂಡಿದ್ದರು. ಈ ವೇಳೆ, ಪೊಲೀಸರು ಮಕ್ಕಳು ಹಾಗೂ ರೋಗಿಗಳ ರಕ್ಷಣೆ ಮಾಡಿದ್ದಾರೆ. ಗುಜರಾತ್ನಲ್ಲಿ ಭೀಕರ ಮಳೆಯಾಗುತ್ತಿರುವ ಕಾರಣ ವಲ್ಸಾದ್, ಅಹಮದಾಬಾದ್, ದಕ್ಷಿಣ ಗುಜರಾತ್ನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ.