ಶಿವಮೊಗ್ಗ: ಪಾಳು ಬಾವಿಗೆ ಬಿದ್ದ ಎಮ್ಮೆ ರಕ್ಷಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿ - buffalo fell into an empty well
ಶಿವಮೊಗ್ಗ: ತಾಲೂಕಿನ ಕೆರೆಹಳ್ಳಿ ಗ್ರಾಮದಲ್ಲಿ ಆಕಸ್ಮಿಕವಾಗಿ ಪಾಳುಬಾವಿಗೆ ಬಿದ್ದ ಎಮ್ಮೆಯನ್ನು ಅಗ್ನಿಶಾಮಕ ಠಾಣೆ ಸಿಬ್ಬಂದಿ ರಕ್ಷಿಸಿದರು. ಗಜೇಂದ್ರಗೌಡ ಎಂಬುವರಿಗೆ ಸೇರಿದ ಎಮ್ಮೆ ಮೇಯಲು ತೆರಳಿದಾಗ ಸುಮಾರು 35 ಅಡಿ ಆಳದ ಪಾಳು ಬಾವಿಗೆ ಬಿದ್ದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿ, ಸ್ಥಳೀಯರ ಸಹಕಾರದೊಂದಿಗೆ ಸುರಕ್ಷಿತವಾಗಿ ಎಮ್ಮೆಯನ್ನು ಮೇಲೆತ್ತಿದರು.