ಹಾವೇರಿ: ನದಿ ಮಧ್ಯೆ ಸಿಲುಕಿದ್ದ ಕುದುರೆ... ದಡ ಸೇರಿಸಿದ ಅಗ್ನಿ ಶಾಮಕ ಸಿಬ್ಬಂದಿ - horse rescued in haveri
ಹಾವೇರಿ: ನದಿ ನೀರಿನಲ್ಲಿ ಸಿಲುಕಿ ಪರದಾಡುತ್ತಿದ್ದ ಕುದುರೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಹಾವೇರಿ ತಾಲೂಕಿನ ನಾಗನೂರು ಬಳಿ ಇರುವ ವರದಾ ನದಿ ನೀರಿನಲ್ಲಿ ಕುದುರೆಯೊಂದು ಸಿಲುಕಿ ಪರದಾಡುತ್ತಿತ್ತು. ಮೂರ್ನಾಲ್ಕು ದಿನಗಳ ಹಿಂದೆ ರೈತರ ಜಮೀನಿನ ಬಳಿ ಓಡಾಡಿಕೊಂಡಿದ್ದ ಕುದುರೆ ಬಳಿಕ ನದಿ ನೀರಿನಲ್ಲಿ ಸಿಲುಕಿಗೊಂಡಿತ್ತು. ಈ ವೇಳೆ ಬೆಳೆ ಹಾನಿ ವೀಕ್ಷಣೆಗೆ ತೆರಳಿದ್ದ ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರು ಕುದುರೆಯನ್ನು ರಕ್ಷಣೆ ಮಾಡುವಂತೆ ಅಗ್ನಿಶಾಮಕ ದಳದ ಸಿಬ್ಬಂದಿಗೆ ಸೂಚಿಸಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೋಟ್ ಮೂಲಕ ತೆರಳಿ ಕುದುರೆಯನ್ನು ರಕ್ಷಣೆ ಮಾಡಿದ್ದಾರೆ.