ಛತ್ರಪತಿ ಶಿವಾಜಿ, ಏಕನಾಥ್ ಶಿಂದೆ ಪರ ಘೋಷಣೆ ಮೊಳಗಿಸಿದ ಬಂಡಾಯ ಶಾಸಕರು- ವಿಡಿಯೋ
ಗುವಾಹಟಿ(ಅಸ್ಸೋಂ): ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡೆದ್ದು ಸದ್ಯ ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಏಕನಾಥ್ ಶಿಂದೆ ಬೆಂಬಲಿತ ಶಾಸಕರು ನಾಳೆ ಮುಂಬೈ ತಲುಪಲಿದ್ದಾರೆ. ತಾವು ಉಳಿದುಕೊಂಡಿದ್ದ ರಾಡಿಸನ್ ಬ್ಲೂ ಹೋಟೆಲ್ನಿಂದ ಗುವಾಹಟಿ ಏರ್ಪೋರ್ಟ್ಗೆ ಆಗಮಿಸುತ್ತಿದ್ದಂತೆ ಎಲ್ಲರೂ ಸೇರಿಕೊಂಡು, "ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ, ಏಕನಾಥ್ ಶಿಂದೆ ಸಾಹೇಬರೇ ನೀವು ಮುಂದೆ ಸಾಗಿ, ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ" ಎಂದು ಘೋಷಣೆಗಳನ್ನು ಮೊಳಗಿಸಿದರು. ಈ ಸಂದರ್ಭದಲ್ಲಿ ಮಾತನಾಡಿರುವ ಶಿಂದೆ, "ನಾವು ನಾಳೆ ಮುಂಬೈ ತಲುಪಿ ವಿಶ್ವಾಸಮತ ಯಾಚನೆಯಲ್ಲಿ ಭಾಗಿಯಾಗಲಿದ್ದೇವೆ. ಶಾಸಕಾಂಗ ಪಕ್ಷದ ಸಭೆ ನಡೆಸಿ ಮುಂದಿನ ನಿರ್ಧಾರ ಪ್ರಕಟಿಸುವೆವು. ನಾವು ಬಂಡಾಯ ಶಾಸಕರಲ್ಲ, ಶಿವ ಸೈನಿಕರು, ಬಾಳಾಸಾಹೇಬ್ ಠಾಕ್ರೆಯವರ ಸಿದ್ಧಾಂತಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವವರು" ಎಂದರು.