ಈಟಿವಿ ಭಾರತದ ಜೊತೆ ರಾಜ್ಯಸಭೆಯಿಂದ ಅಮಾನತಾದ ಸದಸ್ಯ ಸೈಯದ್ ನಾಸೀರ್ ಹುಸೇನ್ ಮಾತು - ಎಂಎಸ್ಪಿ
ನವದೆಹಲಿ: ಕೃಷಿ ಮಸೂದೆಗಳ ಅಂಗೀಕಾರದ ವೇಳೆ ಅಶಿಸ್ತಿನ ಆರೋಪದಲ್ಲಿ ಅಮಾನತಾಗಿರುವ ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಈಟಿವಿ ಭಾರತದೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು ಕೃಷಿ ಮಸೂದೆಗಳನ್ನು ಮತ್ತೆ ಸಂಸತ್ತಿನಲ್ಲಿ ಚರ್ಚೆ ಮಾಡಬೇಕು. ಸಂಸದರ ಅಮಾನತು ಮಾಡಿರುವ ಆದೇಶವನ್ನು ಹಿಂಪಡೆಯಬೇಕು ಹಾಗೂ ಬೆಂಬಲ ಬೆಲೆಯನ್ನು ಶಾಶ್ವತಗೊಳಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದಿದ್ದಾರೆ