ವಿಡಿಯೋ: ಕಾರವಾರ ನೌಕಾನೆಲೆ ಸಿಬ್ಬಂದಿಯೊಂದಿಗೆ ರಾಜನಾಥ್ ಸಿಂಗ್ ಯೋಗಾಭ್ಯಾಸ - ಯೋಗ ಕಾರ್ಯಕ್ರಮದಲ್ಲಿ ಸಚಿವ ರಾಜನಾಥ್ ಸಿಂಗ್
ಉತ್ತರ ಕನ್ನಡ: ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಬೆಳಗ್ಗೆ ಕಾರವಾರ ನೌಕಾನೆಲೆಯಲ್ಲಿ ಭಾರತೀಯ ನೌಕಾಪಡೆ ಸಿಬ್ಬಂದಿಯೊಂದಿಗೆ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾದರು. ಜೂನ್ ತಿಂಗಳಿನಲ್ಲಿ ವಿಶ್ವಯೋಗ ದಿನಾಚರಣೆ ನಡೆಯಲಿದೆ. ಇದರ ಭಾಗವಾಗಿ ಇಂದು ಯೋಗ ತಾಲೀಮು ನಡೆಯಿತು. ಪ್ರಪಂಚದಾದ್ಯಂತ ಯೋಗ ಸಂದೇಶ ಸಾರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.