ಅಂತರ್ ವಿಭಾಗೀಯ ಕ್ರೀಡಾಕೂಟಕ್ಕೆ ರಾಜೇಂದ್ರ ಚೋಳನ್ ಚಾಲನೆ - ರಾಜೇಂದ್ರ ಚೋಳನ್ ಚಾಲನೆ
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಾರ್ಮಿಕ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ಅಂತರ್ ವಿಭಾಗೀಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ವಾ.ಕ.ರ.ಸಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಎಲ್ಲರಿಗೂ ಕೆಲಸದ ಒತ್ತಡ ಇರುತ್ತದೆ. ಅದರ ಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಕ್ರೀಡೆಯಲ್ಲಿ ಭಾಗವಹಿದವರಿಗೆ ಮುಂದಿನ ದಿನಗಳಲ್ಲಿ ನಗದು ಪುರಸ್ಕಾರ ನೀಡಲಾಗುವುದು ಎನ್ನುವ ಮೂಲಕ ಸಿಬ್ಬಂದಿಯನ್ನು ಕ್ರೀಡೆಯತ್ತ ಪ್ರೇರೇಪಿಸಿದರು.