ಸಮಯಕ್ಕೆ ಬಾರದ ಮಳೆ... ಬತ್ತಿ ಹೋಗ್ತಿದೆ ಬೆಳೆ! - kannadanews
ಬೀದರ್ ಜಿಲ್ಲೆಯ ಕೆಲ ಭಾಗದಲ್ಲಿ ವರುಣ ಅಬ್ಬರಿಸಿದ್ದಾನೆ. ಆದ್ರೆ ಜಿಲ್ಲೆಯ ಕಮಲನಗರ, ಔರಾದ್, ಬೀದರ್, ಭಾಲ್ಕಿ ತಾಲೂಕಿನಲ್ಲಿ ಮಳೆ ಬಾರದೆ ರೈತರು ಕಂಗಾಲಾಗಿದ್ದಾರೆ. ಈಗಾಗಲೇ ಬಿತ್ತನೆ ಮಾಡಿದ ಸೋಯಾಬಿನ್, ತೊಗರಿ, ಜೋಳ, ಉದ್ದು, ಹೆಸರು ಪ್ರಮುಖ ಮುಂಗಾರು ಬೆಳೆಗಳಾಗಿದ್ದು, ಭೂಮಿಯಲ್ಲಿ ತೇವಾಂಶದ ಕೊರತೆಯಿಂದ ಚಿಗುರೊಡೆಯುವ ಮೊದಲೇ ಬಾಡಿ ಹೋಗ್ತಿವೆ.