ಸಿಎಂ, ಡಿಸಿ ಬಂದೋದ್ರು... ಶಿವಮೊಗ್ಗದ ಈ ರೈತರಿಗೆ ಸಿಕ್ಕಿಲ್ಲವಂತೆ ಬಿಡಿಗಾಸು ನೆರೆ ಪರಿಹಾರ - ಸಿಎಂ
ಆಗಸ್ಟ್ 9 ರಂದು ಸುರಿದಿದ್ದ ಮಳೆಯಿಂದ ತೀರ್ಥಹಳ್ಳಿ ತಾಲೂಕು ಹೆಗಲತ್ತಿ ಗ್ರಾಮದಲ್ಲಿ 30 ಎಕರೆಯಷ್ಟು ಅಡಿಕೆ, ತೆಂಗು, ಬಾಳೆ ಹಾಗೂ ಭತ್ತ ಸಂಪೂರ್ಣವಾಗಿ ನೆಲಸಮವಾಗಿತ್ತು. ಅಡಿಕೆ ತೋಟದ ನಾಶದಿಂದ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಗುಡ್ಡ ಕುಸಿತದಿಂದ ಒಂದು ಕಡೆ ಹರಿಯುತ್ತಿದ್ದ ಹಳ್ಳ ಈಗ ಮೂರು ಭಾಗವಾಗಿ ಹರಿಯಲು ಪ್ರಾರಂಭವಾಗಿದೆ. ಸಿಎಂ ಖುದ್ದು ಭೇಟಿ ನೀಡಿದ್ರೂ ಸಹ ಪರಿಹಾರ ಸಿಗದೇ ಇರುವುದಕ್ಕೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಈಟಿವಿ ಭಾರತದೊಂದಿಗೆ ತಮ್ಮ ಅಳಲನ್ನು ರೈತರು ತೋಡಿಕೊಂಡಿದ್ದಾರೆ.