'ನನ್ನ ಸೊಸೆ ತುಂಬಾ ಅದೃಷ್ಟಶಾಲಿ': ತೇಜಸ್ವಿ ಯಾದವ್ ಪ್ರಮಾಣವಚನದ ಬಳಿಕ ರಾಬ್ರಿ ದೇವಿ ಮಾತು - ಈಟಿವಿ ಭಾರತ ಕರ್ನಾಟಕ
ಲಾಲೂ ಪ್ರಸಾದ್ ಯಾದವ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ತೇಜಸ್ವಿ ಯಾದವ್ ಬಿಹಾರದ ಉಪ ಮುಖ್ಯಮಂತ್ರಿಯಾಗಿ 2ನೇ ಅವಧಿಗೆ ಪದಗ್ರಹಣ ಮಾಡಿರುವುದು ಇದಕ್ಕೆ ಕಾರಣ. ಈ ಕುರಿತು ಮಾತನಾಡಿರುವ ತಾಯಿ ಹಾಗು ಮಾಜಿ ಸಿಎಂ ರಾಬ್ರಿ ದೇವಿ, "ನನಗೆ ತುಂಬಾ ಸಂತೋಷವಾಗಿದೆ. ಸೊಸೆ ರಾಜಶ್ರೀ ಮನೆಗೆ ಬಂದ ಬಳಿಕ ಬಿಹಾರದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ನನ್ನ ಸೊಸೆ ತುಂಬಾ ಅದೃಷ್ಟಶಾಲಿ" ಎಂದರು. ಇದೇ ವೇಳೆ, ಬಿಹಾರದ ಜನತೆಗೆ ಉತ್ತಮ ದಿನಗಳು ಬರಲಿವೆ ಎಂದು ಹೇಳಿದರು. ತೇಜಸ್ವಿ ಯಾದವ್ ಪತ್ನಿ ರಾಜಶ್ರೀ ಪ್ರತಿಕ್ರಿಯಿಸಿ, "ಎಲ್ಲರಿಗೂ ಧನ್ಯವಾದ ಹೇಳಲು ಬಯಸುವೆ. ತುಂಬಾ ಸಂತೋಷವಾಗಿದೆ" ಎಂದರು.