ಆಸ್ತಿ ವಿವಾದ.. 1950 ರ ಆದೇಶವನ್ನು ಸ್ವತಃ ಓದಿದ ರಾಜಮಾತೆ - Etv bharat kannada
ಮೈಸೂರು: 1950 ರಲ್ಲಿ ಭಾರತ ಸರ್ಕಾರ ಮತ್ತು ರಾಜ ಮನೆತನದ ನಡುವೆ ಒಪ್ಪಂದವಾಗಿದೆ. ರಾಜಮನೆತನಕ್ಕೆ ಕೆಲವು ಖಾಸಗಿ ಆಸ್ತಿಗಳನ್ನು ಬಿಟ್ಟು, ಉಳಿದ ಆಸ್ತಿಗಳನ್ನು 1951 ರಲ್ಲಿ ರಾಜರ ಅಸ್ತಿಗಳು ಯಾವುವು, ಸರ್ಕಾರದ ಅಸ್ತಿಗಳು ಯಾವುವು ಎಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಈ ಆಸ್ತಿಗಳಲ್ಲಿ ರಾಜರ ಕೆಲವು ಆಸ್ತಿಗಳನ್ನು ಬಿಟ್ಟು ಉಳಿದ ಆಸ್ತಿಗಳನ್ನು ಸರ್ಕಾರ ತಮ್ಮ ವಶಕ್ಕೆ ಪಡೆದಿದೆ. ಈ ಬಗ್ಗೆ ನಿನ್ನೆ ಮಾಧ್ಯಮಗೋಷ್ಟಿಯಲ್ಲಿ 1950 ರ ಸರ್ಕಾರಿ ಆದೇಶ ಹಾಗೂ ಆದೇಶದ ಅನುಗುಣವಾಗಿ 1951 ರಲ್ಲಿ ಆಸ್ತಿಗಳ ವಿವರವನ್ನು ಸ್ವತಃ ಪ್ರಮೋದಾ ದೇವಿ ಒಡೆಯರ್ ಓದಿ ತಿಳಿಸಿದ್ದಾರೆ.