ಶಿವಮೊಗ್ಗ: ತೋಟದಲ್ಲಿ ಬೃಹತ್ ಹೆಬ್ಬಾವು ಪತ್ತೆ, ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಸ್ನೇಕ್ ಕಿರಣ್ - ಈಟಿವಿ ಭಾರತ ಕನ್ನಡ
ಶಿವಮೊಗ್ಗ: ತಾಲೂಕಿನ ಕಲ್ಲುಗಂಗೂರು ಸಮೀಪದ ಬೊಮ್ಮನಕಟ್ಟೆಯ ಸಚಿನ್ ಎಂಬುವವರ ಅಡಿಕೆ ತೋಟದಲ್ಲಿ ಸುಮಾರು 10 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದೆ. ಇದು ಯಾವುದೋ ಪ್ರಾಣಿಯನ್ನು ತಿಂದು ತೋಟದಲ್ಲಿ ಮಲಗಿಕೊಂಡಿತ್ತು. ತೋಟದ ಮಾಲೀಕರು ಮಷಿನ್ನಿಂದ ಹುಲ್ಲು ಕೊಯ್ಯುವಾಗ ಕಾಣಸಿಕ್ಕಿದೆ. ತಕ್ಷಣ ಸ್ನೇಕ್ ಕಿರಣ್ ಅವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅವರು ಹೆಬ್ಬಾವು ಹಿಡಿದು, ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.