ಶ್ರೀಲಂಕಾ ಅಧ್ಯಕ್ಷರ ಮನೆಗೆ ನುಗ್ಗಿ ಈಜು, ಜಿಮ್, ಊಟ ಸವಿದು ಪ್ರತಿಭಟನಾಕಾರರ ಮೋಜು! ವಿಡಿಯೋ - ಕೊಲಂಬೊ ಶ್ರೀಲಂಕಾ ಅಧ್ಯಕ್ಷರ ಅರಮನೆ
ಸಹಸ್ರಾರು ಜನರ ಪ್ರತಿಭಟನೆಯಿಂದ ಬೆದರಿದ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಈಗಾಗಲೇ ದೇಶದಿಂದ ಪಲಾಯನ ಮಾಡಿದ್ದಾರೆ. ಕೊಲಂಬೊದಲ್ಲಿನ ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ ಸಾವಿರಾರು ಪ್ರತಿಭಟನಾಕಾರರು ಅರಮನೆ ಮೈದಾನದಲ್ಲಿರುವ ಈಜು ಕೊಳದಲ್ಲಿ ಈಜಿದ್ದಾರೆ. ಇನ್ನೂ ಕೆಲವರು ಕುಟುಂಬಸ್ಥರೊಂದಿಗೆ ಊಟ, ಜಿಮ್ನಲ್ಲಿ ವರ್ಕ್ಔಟ್ ಮಾಡುತ್ತಾ ಎಂಜಾಯ್ ಮಾಡಿದ್ದಾರೆ.