ಚಿಂತಾಮಣಿ ನೂತನ ಜಿಲ್ಲೆ ಹಾಗೂ ರೈತರ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನೆ - chikkaballapu news
ಚಿಕ್ಕಬಳ್ಳಾಪುರ: ರೈತರ ವಿವಿಧ ಬೇಡಿಕೆಗಳ ಹೀಡೆರಿಕೆ ಹಾಗೂ ಚಿಂತಾಮಣಿ ತಾಲೂಕನ್ನು ನೂತನ ಜಿಲ್ಲೆಯಾಗಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಚಿಂತಾಮಣಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಹಲವು ಬೇಡಿಕೆಗಳನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ಧಿಷ್ಟಾವಧಿ ಧರಣಿ ಮಾಡುವುದಾಗಿ ಈಟಿವಿ ಭಾರತ್ಗೆ ರೈತ ಸಂಘದ ಮುಖಂಡರು ಮಾಹಿತಿ ನೀಡಿದ್ದಾರೆ.