ಕರ್ನಾಟಕ

karnataka

ETV Bharat / videos

ನಿಮಗಾಗಿಯೇ ನನ್ನ ಜೀವನ ಮುಡಿಪಾಗಿಟ್ಟಿದ್ದೇನೆ.. ನಾನು 130 ಕೋಟಿ ಜನರ ಪ್ರಧಾನ ಸೇವಕ: ನರೇಂದ್ರ ಮೋದಿ - ಪ್ರಧಾನಿ ಮೋದಿ ಹಿಮಾಚಲ ಪ್ರದೇಶ ಪ್ರವಾಸ

By

Published : May 31, 2022, 5:34 PM IST

ಶಿಮ್ಲಾ(ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಆಯೋಜನಗೊಂಡಿದ್ದ ಗರೀಬ್ ಕಲ್ಯಾಣ್​ ಸಮ್ಮೇಳನದಲ್ಲಿ ಭಾಗಿಯಾಗಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಈ ವೇಳೆ, 'ಕಳೆದ ಎಂಟು ವರ್ಷಗಳಲ್ಲಿ ನಾನು ಒಮ್ಮೆಯೂ ಪ್ರಧಾನಿಯಾಗಿ ಕಾಣಿಸಿಕೊಂಡಿಲ್ಲ. ಫೈಲ್​​ಗಳಿಗೆ ಸಹಿ ಮಾಡುವಾಗ ಮಾತ್ರ ಪ್ರಧಾನಮಂತ್ರಿ ಜವಾಬ್ದಾರಿ ನಿರ್ವಹಿಸುತ್ತೇನೆ. ಇದಾದ ಬಳಿಕ ನಾನು ದೇಶದ 130 ಕೋಟಿ ಭಾರತೀಯರ ಪ್ರಧಾನ ಸೇವಕನಾಗಿ ಕೆಲಸ ಮಾಡುತ್ತೇನೆ. ನಿಮಗೋಸ್ಕರ ನನ್ನ ಜೀವನದ ಸರ್ವಸ್ವವನ್ನು ಮುಡುಪಾಗಿಟ್ಟಿದ್ದೇನೆ' ಎಂದರು. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಂಟು ವರ್ಷ ಪೂರೈಕೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ, ಮೋದಿ ಪ್ರಧಾನ ಮಂತ್ರಿ ಸಮ್ಮಾನ್ ನಿಧಿ ಯೋಜನೆಯ 11ನೇ ಕಂತಿನ ಹಣ ಸಹ ಬಿಡುಗಡೆ ಮಾಡಿದರು.

ABOUT THE AUTHOR

...view details