ವಿಡಿಯೋ: ಈ ಹಳ್ಳಿಯ ಪ್ರತಿ ಮನೆಯ ಗೋಡೆ ಮೇಲೂ ಪಠ್ಯಕ್ರಮ! ಶಾಲಾ ಶಿಕ್ಷಕನ ಮಹತ್ವದ ನಡೆ - ಮನೆಯ ಗೋಡೆಗಳ ಮೇಲೆ ಪಠ್ಯಕ್ರಮ
ಜಬಲ್ಪುರ್(ಮಧ್ಯಪ್ರದೇಶ): ವಿದ್ಯಾರ್ಥಿ ಜೀವನದಲ್ಲಿ ಬಹುಪಾತ್ರದಾರಿ ಶಿಕ್ಷಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಸಾವಿರಾರು ಶಿಕ್ಷಕರು ತಮ್ಮ ಜೀವನ ಮುಡುಪಾಗಿಟ್ಟಿರುವ ನಿದರ್ಶನಗಳಿವೆ. ಅಂಥದ್ದೇ ಒಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಜಬಲ್ಪುರದ ಹಳ್ಳಿವೊಂದರಲ್ಲಿ ಶಿಕ್ಷಕರೊಬ್ಬರು ಮಕ್ಕಳ ಕಲಿಕೆಗೆ ಅನುಕೂಲವಾಗಲಿ ಎಂದು ಹಳ್ಳಿಯ ಪ್ರತಿ ಮನೆ ಗೋಡೆಗಳ ಮೇಲೂ ಪಠ್ಯಕ್ರಮ ಬರೆಸಿದ್ದಾರೆ. ಊರಿನಲ್ಲಿರುವ ಪ್ರತಿಯೊಬ್ಬರ ಮನೆಯ ಗೋಡೆಗಳ ಮೇಲೆ ಪಠ್ಯಕ್ರಮ ಹಾಗೂ ವಿಜ್ಞಾನ ವಿಭಾಗದ ಕೆಲವೊಂದು ಚಿತ್ರ ಬಿಡಸಲಾಗಿದೆ. ಇದರಿಂದ ಮಕ್ಕಳು ಮತ್ತಷ್ಟು ವೇಗವಾಗಿ ಕಲಿಯಬಹುದು ಎಂಬುದು ಶಿಕ್ಷಕರ ಮಾತು.