3500 ಕಿ.ಮೀ ಪಾದಯಾತ್ರೆ ಪೂರ್ಣಗೊಳಿಸುವವರೆಗೂ ಮನೆಗೆ ಮರಳುವುದಿಲ್ಲ: ಪ್ರಶಾಂತ್ ಕಿಶೋರ್ - ಜನ್ ಸೂರಜ್ ಪಾದಯಾತ್ರೆ
ಪಶ್ಚಿಮ ಚಂಪಾರಣ್ (ಬಿಹಾರ): ಪ್ರಶಾಂತ್ ಕಿಶೋರ್ ಗುರುವಾರ ಬೆಳಗ್ಗೆ ಪಶ್ಚಿಮ ಚಂಪಾರಣ್‌ನ ಮನಾತಂಡ್ ಬ್ಲಾಕ್‌ನಲ್ಲಿ ನಡೆದ ಪ್ರಾರ್ಥನಾ ಸಭೆಯೊಂದಿಗೆ ಜನ್ ಸೂರಜ್ ಪಾದಯಾತ್ರೆ ಪ್ರಾರಂಭಿಸಿದರು. ಇದಾದ ಬಳಿಕ ಪ್ರಶಾಂತ್ ಕಿಶೋರ್ ಸ್ಥಳೀಯ ಜನರೊಂದಿಗೆ ಸಸಿಗಳನ್ನು ನೆಟ್ಟರು. 3500 ಕಿ.ಮೀ ಪಾದಯಾತ್ರೆ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ನಾನು ಮನೆಗೆ ಮರಳುವುದಿಲ್ಲ ಎಂದು ಹೇಳಿದರು. ನೀವು ಧರ್ಮ, ಜಾತಿ ಆಧಾರದಲ್ಲಿ ಮತ ಹಾಕುತ್ತಿರುವುದರಿಂದ, ನಿಮ್ಮ ಸಮಸ್ಯೆಗಳು ಬಗೆಹರಿಯುತ್ತಿಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದರು.