ಹುಬ್ಬಳ್ಳಿಯಲ್ಲಿ ತಿರಂಗಾ ಧ್ವಜ ರ‍್ಯಾಲಿ.. ವಿದ್ಯಾರ್ಥಿಗಳ ಜೊತೆಗೆ ಕುಣಿದು ಕುಪ್ಪಳಿಸಿದ ಕೇಂದ್ರ ಸಚಿವ ಜೋಶಿ - ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ
ಹುಬ್ಬಳ್ಳಿ : ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ತಿರಂಗಾ ಧ್ವಜ ರ‍್ಯಾಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಭಾಗವಹಿಸಿ ವಿದ್ಯಾರ್ಥಿಗಳ ಜೊತೆಗೆ ರಾಷ್ಟ್ರೀಯ ಧ್ವಜವನ್ನು ಹಿಡಿದು ಭರ್ಜರಿಯಾಗಿ ಹೆಜ್ಜೆ ಹಾಕಿದರು. ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಬೃಹತ್ ತಿರಂಗಾ ಧ್ವಜದ ರ‍್ಯಾಲಿಯಲ್ಲಿ ವಿದ್ಯಾರ್ಥಿಗಳ ಜೊತೆಗೆ ಕುಣಿದು ಅಮೃತ ಮಹೋತ್ಸವದ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಿದರು. ಇದೇ ವೇಳೆ ಬೈಕ್ ರ‍್ಯಾಲಿಗೆ ಸ್ವತಃ ಬೈಕ್ ಚಾಲನೆ ಮಾಡುವ ಮೂಲಕವೇ ಚಾಲನೆ ನೀಡಿದರು.