ಭಾರತ ಜೋಡೋದಲ್ಲಿ ದೇಶಕ್ಕೆ ಗೌರವ ಕೊಡುವವರನ್ನು ಭೇಟಿಯಾಗಲಿ: ಪ್ರಹ್ಲಾದ ಜೋಶಿ - ಈಟಿವಿ ಭಾರತ ಕನ್ನಡ
ಹುಬ್ಬಳ್ಳಿ: ಭಾರತ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಕನಿಷ್ಠ ಕರ್ನಾಟಕದಲ್ಲಿ ಭಾರತ ಮಾತೆಗೆ ಗೌರವ ಕೊಡುವ ಜನರನ್ನು ಭೇಟಿಯಾಗಲಿ. ಪ್ರಥಮ ಬಾರಿಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಚಟುವಟಿಕೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಭಾರತ ಜೋಡೋಗೆ ಯಾರದೂ ತಕರಾರಿಲ್ಲ. ಭಾರತ ಜೋಡೋ ಹೆಸರಲ್ಲಿ ತೋಡೋದವರ ಜೊತೆ ಕೂಡಬೇಡಿ ಎಂದು ವ್ಯಂಗ್ಯವಾಡಿದರು. ಮಲ್ಲಿಕಾರ್ಜುನ ಖರ್ಗೆ ಹಿರಿಯರು, ನಾನು ಹಾಗೂ ಅವರು ಕಳೆದ ಹದಿನೈದು ವರ್ಷಗಳಿಂದ ಸಂಸತ್ನಲ್ಲಿದ್ದೇವೆ. ಖರ್ಗೆಯವರು ರಿಮೋಟ್ ಕಂಟ್ರೋಲ್ ಅಧ್ಯಕ್ಷರಾಗಬಾರದು ಅನ್ನೋದು ನನ್ನ ಆಸೆ ಎಂದು ಜೋಶಿ ಹೇಳಿದರು.