ಅಪ್ಪು 'ಜೇಮ್ಸ್' ಹವಾ ಶುರು ಗುರು... - ಜೇಮ್ಸ್ ಚಿತ್ರದ ಮುಹೂರ್ತ
ಕಳೆದ ಎರಡು ವರ್ಷಗಳಿಂದ ಅಭಿಮಾನಿಗಳಲ್ಲಿ ಕಾತರ ಹೆಚ್ಚಿಸಿದ್ದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ 'ಜೇಮ್ಸ್' ಚಿತ್ರ ಇಂದು ಅದ್ಧೂರಿಯಾಗಿ ಸೆಟ್ಟೇರಿದೆ. ವಿಶೇಷ ಅಂದ್ರೆ ಫಸ್ಟ್ ಟೈಂ ಅಪ್ಪು ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಕ್ಲಾಪ್ ಮಾಡಿದ್ದು, ಯುವರತ್ನನ ನಯಾ ಅವತಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನು ಚಿತ್ರವನ್ನು ಅಣ್ಣಾವ್ರ ಅಭಿಮಾನಿಯೊಬ್ಬರು ನಿರ್ಮಾಣ ಮಾಡ್ತಿದ್ದು, ಮುಂದಿನ ತಿಂಗಳಿನಿಂದ ಜೇಮ್ಸ್ ಅಂಡ್ ಟೀಮ್ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.