video : ಮಡಿಕೇರಿಯಲ್ಲಿ ಅಳಿವಿನಂಚಿನಲ್ಲಿರುವ ಮುಳ್ಳುಹಂದಿ ಪ್ರತ್ಯಕ್ಷ! - ಮಡಿಕೇರಿಯಲ್ಲಿ ಮುಳ್ಳುಹಂದಿ ಪ್ರತ್ಯಕ್ಷ
ಮಡಿಕೇರಿ : ಅಳಿವಿನಂಚಿನಲ್ಲಿರುವ ಮುಳ್ಳುಹಂದಿಯೊಂದು ಮಡಿಕೇರಿ ನಗರದ ಮ್ಯಾನ್ ಕಾಂಪೌಂಡ್ ಬಳಿ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದೆ. ಅಪರೂಪಕ್ಕೆ ಕಾಣಸಿಗುವ ಮುಳ್ಳಂದಿಯನ್ನು ಕಂಡು ಸ್ಥಳೀಯ ನಿವಾಸಿಗಳು ಫುಲ್‌ಖುಷ್ ಆಗಿದ್ದಾರೆ. ಮಳೆ ಕಾಣಿಸಿದ ಬೆನ್ನಲ್ಲೇ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದೆ ಎನ್ನಲಾಗಿದೆ. ಕಾಂಪೌಂಡಿನ ಸುತ್ತಮುತ್ತಲೂ ಓಡಾಡಿ ಬಳಿಕ ಮರಳಿ ಕಾಡು ಸೇರಿದೆ. ಮುಳ್ಳು ಹಂದಿಯ ಓಡಾಟದ ದೃಶ್ಯವನ್ನು ರಮೇಶ್ ಎಂಬುವರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.