ರಸ್ತೆಮಧ್ಯೆ ಕೆಟ್ಟು ನಿಂತ ಪೊಲೀಸ್ ವ್ಯಾನ್.. ಸಾರ್ವಜನಿಕರಿಂದ ತಳ್ಳು ಗಾಡಿ-ಐಸಾ, ತಳ್ಳು ಗಾಡಿ-ಐಸಾ! - police vehicle berakdowan viral
ಚಾಮರಾಜನಗರ: ಪೊಲೀಸರ ವಾಹನವೊಂದು ರಸ್ತೆ ಮಧ್ಯೆ ಕೆಟ್ಟು ನಿಂತು ಅವಾಂತರ ಸೃಷ್ಟಿಸಿರುವ ಘಟನೆ ಹನೂರು ಪಟ್ಟಣದ ಮುಖ್ಯರಸ್ತೆಯಲ್ಲಿ ನಡೆದಿದೆ. ಬಿಗಿ ಬಂದೋಬಸ್ತ್ ಗಾಗಿ ಆಗಮಿಸಿದ್ದ ಪೊಲೀಸರ ವ್ಯಾನ್ ರಸ್ತೆ ಮಧ್ಯದಲ್ಲೇ ಕೆಟ್ಟು ನಿಂತು ಸಂಚಾರಕ್ಕೆ ಅಡ್ಡಿ ಉಂಟುಮಾಡಿದೆ. ಇದರಿಂದಾಗಿ, ಇತರೆ ವಾಹನಗಳು ಹಾಗೂ ಸಾರ್ವಜನಿಕರು ಕಿರಿಕಿರಿ ಅನುಭವಿಸಿದ್ದಾರೆ. ಬಳಿಕ ಅಲ್ಲೇ ಇದ್ದ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿ ತಳ್ಳು ಗಾಡಿ-ಐಸಾ ಎಂದು ವ್ಯಾನನ್ನು ನೂಕಿಕೊಂಡು ರಸ್ತೆಬದಿವರೆಗೆ ತಂದು ನಿಲ್ಲಿಸಿದ್ದಾರೆ. ರಿಪೇರಿಯ ಬಳಿಕ ಪೊಲೀಸ್ ವಾಹನವನ್ನು ತೆಗೆದುಕೊಂಡು ಹೋಗಿರುವುದಾಗಿ ತಿಳಿದುಬಂದಿದೆ. ಸದ್ಯ ಈ ಪೊಲೀಸ್ ವಾಹನ ತಳ್ಳುವ ದೃಶ್ಯಗಳು ಎಲ್ಲೆಡೆ ವೈರಲ್ ಆಗಿದೆ.