ಸ್ವದೇಶಿ ನಿರ್ಮಿತ ಪಿನಾಕಾ ವಿಸ್ತೃತ ರಾಕೆಟ್ ಪೋಖ್ರಾನ್ನಲ್ಲಿ ಪ್ರಯೋಗ.. ವಿಡಿಯೋ - ರಾಜಸ್ಥಾನದ ಪೋಖ್ರಾನ್
ರಾಜಸ್ಥಾನದ ಪೋಖ್ರಾನ್ನಲ್ಲಿ ಇಂದು ಸ್ವದೇಶಿ ನಿರ್ಮಿತ ಪಿನಾಕಾ ವಿಸ್ತೃತ ಸರಣಿಯ ರಾಕೆಟ್‌ನ ಯಶಸ್ವಿ ಪ್ರಯೋಗ ನಡೆಸಲಾಯಿತು. ಫೈರಿಂಗ್ ರೇಂಜ್‌ಗಳಲ್ಲಿ ನಡೆಸಲಾದ ಪ್ರಯೋಗ ನಿಖರತೆ ಸಾಧಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಇದನ್ನು ಅಭಿವೃದ್ಧಿ ಪಡಿಸಿದೆ. 15 ಅಡಿ ಉದ್ದದ ರಾಕೆಟ್ ಇದಾಗಿದ್ದು, ಸುಮಾರು 280 ಕೆಜಿ ತೂಕವಿದೆ. 100 ಕೆಜಿವರೆಗೆ ಸಿಡಿತಲೆಗಳನ್ನು ಹೊತ್ತೊಯಬಲ್ಲ ಶಕ್ತಿ ಈ ರಾಕೆಟ್ಗಿದೆ.