ಮೈಸೂರಿನಲ್ಲಿ ಮಳೆಯಿಂದ ಉಪ್ಪಾರ ಬಡಾವಣೆ ಜಲಾವೃತ - ಉಪ್ಪಾರ ಬಡಾವಣೆ ಸಂಪೂರ್ಣವಾಗಿ ಜಲಾವೃತ
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನಂಜನಗೂಡು ತಾಲೂಕಿನ ಹೆಡತಲೆ ಗ್ರಾಮದಲ್ಲಿರುವ ಉಪ್ಪಾರ ಬಡಾವಣೆ ಸಂಪೂರ್ಣವಾಗಿ ಜಲಾವೃತವಾಗಿದೆ. ಹೌದು, ಕಳೆದ ಮೂರು ದಿನಗಳಿಂದ ಮತ್ತೆ ಮಳೆ ನಿರಂತರವಾಗಿ ರಾತ್ರಿಯ ವೇಳೆ ಸುರಿಯುತ್ತಿರುವುದರಿಂದ ಉಪ್ಪಾರ ಬಡಾವಣೆ ಸಂಪೂರ್ಣವಾಗಿ ಜಲಾವೃತವಾಗಿದೆ. ಮನೆಗಳಿಗೆ ಮಳೆ ನುಗ್ಗಿದ್ದರಿಂದ ನಿವಾಸಿಗಳು ಪರದಾಡುವಂತಾಗಿದೆ. ಮನೆಯಿಂದ ನೀರು ಹೊರ ಹಾಕಲು ಆಗದ ಸ್ಥಿತಿಯಲ್ಲಿ ನಿವಾಸಿಗಳಿದ್ದಾರೆ. ಅಲ್ಲದೇ, ಜಾನುವಾರುಗಳ ಕೊಟ್ಟಿಗೆಗಳು ಕೂಡಾ ಮುಳುಗಿ ಹೋಗಿದ್ದು, ಜಾನುವಾರುಗಳನ್ನು ನೀರಿನಿಂದ ರಕ್ಷಣೆ ಮಾಡಿಕೊಂಡು ಜಮೀನುಗಳತ್ತ ಕರೆದುಕೊಂಡು ಹೋಗುತ್ತಿದ್ದಾರೆ. ಕುರಿಗಳು ಕೂಡ ನೀರಿನಲ್ಲಿ ಮುಳುಗಿ ಹೋಗುತ್ತಿರುವುದರಿಂದ ಅವುಗಳನ್ನು ಎತ್ತಿಕೊಂಡು ಹೋಗುವಂತಾಗಿದೆ.