ಧಾರಾಕಾರ ಮಳೆಗೆ ಅಜ್ಜಂಪುರ ತಾಲೂಕು ಜಲಾವೃತ - ಅಜ್ಜಂಪುರ ಪಟ್ಟಣ ಜಲಾವೃತ
ಚಿಕ್ಕಮಗಳೂರು ಜಿಲ್ಲಾದ್ಯಂತ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಅಜ್ಜಂಪುರ ಪಟ್ಟಣ ಜಲಾವೃತವಾಗಿದೆ. ರಸ್ತೆಯ ಮೇಲೆ ಮಳೆಯ ನೀರು ಭೋರ್ಗರೆಯುತ್ತಿದೆ. ಪರಿಣಾಮ ನಡು ರಸ್ತೆಯಲ್ಲಿ ವಾಹನಗಳು ನಿಲ್ಲುವಂತೆ ಆಗಿದೆ. ಇತಿಹಾಸದಲ್ಲೇ ಕಂಡು ಕೇಳದ ಮಳೆಗೆ ಅಜ್ಜಂಪುರ ತತ್ತರಿಸಿದೆ. ಇದರಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಪಟ್ಟಣದಾದ್ಯಂತ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.