ಏಷ್ಯಾಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ದಿಗ್ವಿಜಯ.. ದೇಶದೆಲ್ಲೆಡೆ ಸಂಭ್ರಮಾಚರಣೆ: ವಿಡಿಯೋ - ಪಾಕಿಸ್ತಾನ ವಿರುದ್ಧ ಭಾರತ ದಿಗ್ವಿಜಯ
ಭಾರತಕ್ಕೆ ನಿನ್ನೆ ಸಂಭ್ರಮದ ದಿನ. ಕೋಟ್ಯಂತರ ಭಾರತೀಯರ ಹೃದಯ ಉಲ್ಲಸಿತಗೊಂಡ ಕ್ಷಣ. ಏಷ್ಯಾ ಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಯಾದ ಪಾಕಿಸ್ತಾನ ವಿರುದ್ಧ ಭಾರತ ದಿಗ್ವಿಜಯ ಸಾಧಿಸಿರುವುದು ಸಂಭ್ರಮದ ಅಲೆಯನ್ನು ಎಬ್ಬಿಸಿದೆ. ದೇಶಾದ್ಯಂತ ಜನರು ಮಧ್ಯರಾತ್ರಿವರೆಗೂ ರಾಷ್ಟ್ರಧ್ವಜಗಳನ್ನು ಹಿಡಿದು ಭಾರತ ಮಾತೆಗೆ ಜೈಕಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.