ಮಕ್ಕಳ ಕಳ್ಳನೆಂದು ಭಾವಿಸಿ ಭಿಕ್ಷುಕನಿಗೆ ಥಳಿಸಿದ ಜನ - ಜನರು ಭಿಕ್ಷುಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ
ಯಾದಗಿರಿ ಜಿಲ್ಲಾದ್ಯಂತ ಮಕ್ಕಳ ಕಳ್ಳರಿದ್ದಾರೆ ಎಂಬ ವದಂತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಕಳ್ಳನೆಂದು ಭಾವಿಸಿ ಜನರು ಭಿಕ್ಷುಕನಿಗೆ ಥಳಿಸಿದ ಘಟನೆ ಯಾದಗಿರಿ ನಗರದ ಹತ್ತಿಕುಣಿ ಕ್ರಾಸ್ ಸಮೀಪ ನಡೆದಿದೆ. ನಾನು ಸುರಪುರದವನು, ನಾನು ಭೀಕ್ಷುಕ, ಬಿಟ್ಟು ಬಿಡಿ ಎಂದು ವ್ಯಕ್ತಿ ಕೇಳಿಕೊಂಡಿದ್ದಾನೆ. ಈ ವೇಳೆ ಪ್ರೂಫ್ ಕೇಳಿದ ಜನರು ಭಿಕ್ಷುಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಭಿಕ್ಷುಕನನ್ನು ನಗರ ಠಾಣೆಗೆ ತಂದು ಒಪ್ಪಿಸಿದ್ದಾರೆ. ಈ ಘಟನೆ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.