ಕರ್ನಾಟಕ

karnataka

ETV Bharat / videos

ವಿಡಿಯೋ: ರೈಲ್ವೆ ಪ್ಲಾಟ್ ​ಫಾರಂ​​ನಲ್ಲೇ ಪ್ರಯಾಣಿಕರಿಂದ ಸಖತ್​ ಗರ್ಬಾ ಡ್ಯಾನ್ಸ್​! - ಪ್ರಯಾಣಿಕರಿಂದ ಸಖತ್​ ಗರ್ಬಾ ಡ್ಯಾನ್ಸ್​

By

Published : May 26, 2022, 4:07 PM IST

ರತ್ಲಾಮ್​(ಮಧ್ಯಪ್ರದೇಶ): ರೈಲ್ವೆ ಪ್ಲಾಟ್​ಫಾರಂ​​ನಲ್ಲಿ ತುಂಬಾ ಸಮಯ ನಿಂತುಕೊಂಡಿದ್ದ ಪ್ರಯಾಣಿಕರು ಬೇಸರ ಹೋಗಲಾಡಿಸಿಕೊಳ್ಳಲು ಗರ್ಬಾ ಡ್ಯಾನ್ಸ್ ಮಾಡಿದ್ದಾರೆ. ಮಧ್ಯಪ್ರದೇಶದ ರತ್ಲಾಮ್​​ನ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಪ್ಲಾಟ್​ಪಾರಂ ನಂಬರ್​ 4ರಲ್ಲಿ ಪ್ರಯಾಣಿಕರು ಈ ರೀತಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಬಾಂದ್ರಾ - ಹರಿದ್ವಾರ ರೈಲು ಸಮಯಕ್ಕಿಂತ ಮುಂಚಿತವಾಗಿ ರೈಲ್ವೆ ನಿಲ್ದಾಣದಲ್ಲಿ ಬಂದು ನಿಂತ ಕಾರಣ, ಪ್ರಯಾಣಿಕರು ಬೇಸರಗೊಂಡಿದ್ದರು. ಅದನ್ನ ಹೋಗಲಾಡಿಸುವ ಉದ್ದೇಶದಿಂದ ಎಲ್ಲರೂ ಸೇರಿಕೊಂಡು ಗರ್ಬಾ ಡ್ಯಾನ್ಸ್ ಮಾಡಿದ್ದಾರೆ. ನಿಲ್ದಾಣದಲ್ಲಿದ್ದ ಇತರ ಪ್ರಯಾಣಿಕರು ಇದರ ವಿಡಿಯೋ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.

ABOUT THE AUTHOR

...view details