ಮೊದಲ ಪ್ರಯತ್ನದಲ್ಲೇ ಮಗ ದಾವಣಗೆರೆಗೆ ಕೀರ್ತಿ ತಂದಿದ್ದಾನೆ.. UPSC ಟಾಪರ್ ಅವಿನಾಶ್ ಪೋಷಕರ ಸಂತಸ - ಮೊದಲ ಪ್ರಯತ್ನದಲ್ಲೇ ರ್ಯಾಂಕ್ ಬಂದಿರುವ ಅವಿನಾಶ್
ದಾವಣಗೆರೆ: 2021ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ದಾವಣಗೆರೆಯ ಅವಿನಾಶ್ ವಿ ಅವರು 31ನೇ ರ್‍ಯಾಂಕ್ ಪಡೆದಿದ್ದಾರೆ. ಅವಿನಾಶ್ ಅವರು ಮೊದಲನೇ ಪ್ರಯತ್ನದಲ್ಲೇ ಅತ್ಯುತ್ತಮ ಸಾಧನೆ ಮಾಡಿರುವುದು ಇಡೀ ದಾವಣಗೆರೆ ಜನರ ಸಂತಸಕ್ಕೆ ಕಾರಣವಾಗಿದೆ. ಬೆಂಗಳೂರು, ದೆಹಲಿಯಲ್ಲಿ ಕೋಚಿಂಗ್ ಪಡೆದಿದ್ದರಿಂದ ಅವರು ಈ ಸಾಧನೆ ಮಾಡಲು ಸಾಧ್ಯವಾಗಿದೆ. ನಗರದ ಲಾಯರ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ತಂದೆ ವಿಠ್ಠಲ್ ಹಾಗೂ ತಾಯಿ ಸ್ಮಿತಾ ಅವರಿಗೆ ಕರೆ ಮೂಲಕ ಶುಭಾಶಯಗಳ ಮಹಪೂರವೇ ಹರಿದು ಬರುತ್ತಿದೆ.