'ನಾವು ಶ್ರೇಷ್ಠತೆಯ ತುತ್ತತುದಿಯಲ್ಲಿದ್ದೇವೆ, ಕಾನ್ ಫಿಲ್ಮ್ ಫೆಸ್ಟಿವಲ್ ಭಾರತದಲ್ಲೂ ನಡೆಯುವ ದಿನ ಬರುತ್ತೆ': ದೀಪಿಕಾ
ಮೇ 17ರಿಂದ 28ರವರೆಗೆ ಫ್ರಾನ್ಸ್ನಲ್ಲಿ ಪ್ರತಿಷ್ಠಿತ ಕಾನ್ ಫೆಸ್ಟಿವಲ್ ನಡೆಯುತ್ತಿದ್ದು, ಇದರಲ್ಲಿ ತೀರ್ಪುಗಾರರಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೊಣೆ ಭಾಗಿಯಾಗಿದ್ದಾರೆ. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ವೇಳೆ ಮಾತನಾಡಿರುವ ನಟಿ, ಭಾರತವು ಶ್ರೇಷ್ಠತೆಯ ತುತ್ತತುದಿಯಲ್ಲಿದೆ. ಇದು ಕೇವಲ ಆರಂಭ. ಭಾರತ ಕೇನ್ಸ್ನಲ್ಲಿ ಇರಬೇಕಾಗಿಲ್ಲ, ಮುಂದೊಂದು ದಿನ ಕಾನ್ ಭಾರತಕ್ಕೆ ಬರಲಿದೆ. ನಮ್ಮಲ್ಲೂ ಕಾನ್ ಫಿಲ್ಮ್ ಫೆಸ್ಟಿವಲ್ ನಡೆಯಲಿದೆ ಎಂದರು. ಈ ಕಾರ್ಯಕ್ರಮದಲ್ಲಿ ಸಂಗೀತಗಾರ ಎ.ಆರ್ ರೆಹಮಾನ್, ನಟಿ ಪೂಜಾ ಹೆಗ್ಡೆ, ತಮನ್ನಾ ಭಾಟಿಯಾ,ಆರ್. ಮಾಧವನ್, ಹೀನಾ ಖಾನ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.