2021ರ ಗಣರಾಜ್ಯೋತ್ಸವ ಪ್ರದರ್ಶನಕ್ಕೆ ಈ ರಾಜ್ಯದ ನೃತ್ಯ ತಂಡ ಆಯ್ಕೆ! - perform on R-Day in New Delhi
ಭಾವನಿಪಟ್ನ (ಒಡಿಶಾ): ನವದೆಹಲಿಯ ರಾಜ್‌ಪಥದಲ್ಲಿ ನಡೆಯಲಿರುವ 2021 ರ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಪ್ರದರ್ಶನ ನೀಡಲು ಕಲಹಂಡಿಯ ಬಜಶಾಲಾ ಎಂಬ ಜಾನಪದ ನೃತ್ಯ ತಂಡವನ್ನು ಆಯ್ಕೆ ಮಾಡಲಾಗಿದೆ. ಮಾಹಿತಿಯ ಪ್ರಕಾರ, ಜನವರಿ 26 ರಂದು ರಾಜ್ಪಥ್ನಲ್ಲಿ ಪೂರ್ವ ಭಾರತವನ್ನು ಪ್ರತಿನಿಧಿಸುವ ಏಕೈಕ ತಂಡ ಇದಾಗಿದೆ. ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ಕೋಲ್ಕತ್ತಾದ ಪೂರ್ವ ವಲಯ ಸಾಂಸ್ಕೃತಿಕ ಕೇಂದ್ರ (EZCC) ಮೆರವಣಿಗೆಯಲ್ಲಿ ಇದನ್ನು ಪ್ರಸ್ತುತಪಡಿಸಲಾಗುವುದು ಎಂದು ತಿಳಿದು ಬಂದಿದೆ.
Last Updated : Dec 29, 2020, 10:41 PM IST