ಕರ್ನಾಟಕ

karnataka

ETV Bharat / videos

ಶ್ರೀಕೃಷ್ಣ ಬಾಲನಿಕೇತನ ಶಾಲಾ ಕಟ್ಟಡ ಉದ್ಘಾಟಿಸಿದ ನಿರ್ಮಲಾ ಸೀತಾರಾಮನ್ - Sri Krishna Balaniketan School

By

Published : May 15, 2022, 7:07 AM IST

ಉಡುಪಿ: ಪೇಜಾವರ ಮಠಕ್ಕೆ ಒಳಪಟ್ಟ ಶ್ರೀಕೃಷ್ಣ ಬಾಲನಿಕೇತನ ಶಾಲೆಯ ಕಟ್ಟಡವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಿದರು. ಮುಚ್ಲುಕೋಡು ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿರುವ ನೂತನ ಕಟ್ಟಡ ಉದ್ಘಾಟಿಸಿದ ಬಳಿಕ ಅವರು ಶಾಲಾ ಆವರಣದಲ್ಲಿ ಹಣ್ಣಿನ ಗಿಡ ನೆಟ್ಟರು. ನಂತರ ಅನಾಥ ಮಕ್ಕಳೊಂದಿಗೆ ಮಾತನಾಡಿದರು. ಈ ವೇಳೆ ಮಾತನಾಡಿದ ಕೇಂದ್ರ ಸಚಿವೆ, 'ನನ್ನ ಸಂಸದರ ನಿಧಿಯಿಂದ ಶಾಲಾ ಕಟ್ಟಡ ನಿರ್ಮಾಣ ಮಾಡಿಸಿದ್ದು, ರಾಜಕೀಯ ಜೀವನದಲ್ಲಿ ನೆನಪಿನಲ್ಲಿ ಉಳಿಯುವಂಥದ್ದು. ನಾನು ಜನ ಸೇವೆಯೇ ಜನಾರ್ದನ ಸೇವೆ ಎಂದುಕೊಂಡಿದ್ದೇನೆ. ಭಗವಾನ್ ಶ್ರೀಕೃಷ್ಣನ ಆಶೀರ್ವಾದ ದೊರಕಿದೆ' ಎಂದರು.

ABOUT THE AUTHOR

...view details