ಬೊಮ್ಮಾಯಿ ನಾಯಕತ್ವದಲ್ಲಿಯೇ ಮುಂದಿನ ಚುನಾವಣೆ: ಸಚಿವ ಶ್ರೀರಾಮುಲು
ಬಳ್ಳಾರಿ: ನಾಯಕತ್ವ ಗೊಂದಲ ನಮ್ಮ ಪಕ್ಷದಲ್ಲಿ ಮತ್ತು ಹೈಕಮಾಂಡ್ನಲ್ಲಿ ಇಲ್ಲ. ಬೊಮ್ಮಾಯಿ ಅವರ ನಾಯಕತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸುತ್ತೇವೆ. ಕಾನೂನು ಸಚಿವ ಮಾಧುಸ್ವಾಮಿ ಅವರು ಯಾವ ದೃಷ್ಟಿಯಿಂದ, ಏನ್ ಹೇಳಿದ್ದಾರೋ ಎಂಬುದು ಗೊತ್ತಿಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದರು. ಈ ರೀತಿಯ ಹೇಳಿಕೆ ಕೊಡುವಾಗ ಯೋಚನೆ ಮಾಡಿ ಕೊಡಬೇಕಿತ್ತು. ನಾಯಕತ್ವದ ಬಗ್ಗೆ ನಮ್ಮ ಪಕ್ಷದ ಹೈಕಮಾಂಡ್ನಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.