ವೀರ ಧೀರ ಯೋಧರಿಗೆ ನಮ್ಮ ಸಲಾಂ: ಕೊರೊನಾ ಯೋಧರಿಗೆ ಹಾಡಿನ ಮೂಲಕ ಕೃತಜ್ಞತೆ - latest corona warriers news
ಕೊರೊನಾ ನಿಯಂತ್ರಿಸಲು ಸಾವಿರಾರು ಕೊರೊನಾ ವಾರಿಯರ್ಸ್ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಈ ಕೊರನಾ ವಾರಿಯರ್ಸ್ ಗೆ ಕೊಪ್ಪಳದಲ್ಲಿ ಕಲಾವಿದರು ಹಾಡಿನ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ವೀರೇಶ್ ಬೆಟಗೇರಿ ಅವರ ಸಾಹಿತ್ಯಕ್ಕೆ ಕಿನ್ನಾಳದ ಗಾಯಕ ಭಾಷಾ ಹಿರೇಮನಿ ಅವರು ಧ್ವನಿ ನೀಡಿದ್ದಾರೆ. 'ಸಲಾಂ ಸಲಾಂ, ವೀರ ಧೀರ ಯೋಧರಿಗೆ ನಮ್ಮ ಸಲಾಂ, ಆರಕ್ಷಕರಿಗೆ ಸಲಾಂ' ಎಂದು ಆರಂಭವಾಗುವ ಈ ಕೃತಜ್ಞತೆಯ ಗೀತೆಯನ್ನು ನಗರದ ಸಾಹಿತ್ಯ ಭವನದ ಬಳಿ ನಗರ ಠಾಣೆಯ ಪಿಐ ಮೌನೇಶ್ವರ್ ಮಾಲಿ ಪಾಟೀಲ್ ಅವರು ಬಿಡುಗಡೆ ಮಾಡಿದರು.