ನೆಲ್ಲೈ ಕಲ್ಲು ಕ್ವಾರಿ ಅಪಘಾತ: ಭೂಕುಸಿತದ ವಿಡಿಯೋ ಬಿಡುಗಡೆ ಮಾಡಿದ ಪೊಲೀಸರು!
ಕ್ವಾರಿಯಲ್ಲಿ ಬಂಡೆಗಳು ಬಿದ್ದಿರುವ ವಿಡಿಯೋವನ್ನು ನೆಲ್ಲೈ ಜಿಲ್ಲಾ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಆದಿಮಿತಿಪ್ಪನ್ ಕುಲಂ ಕಲ್ಲು ಕ್ವಾರಿಯಲ್ಲಿ ಕಲ್ಲು ಬಂಡೆಯೊಂದು ಬಿದ್ದು ಆರು ಮಂದಿ ಕಾರ್ಮಿಕರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರನ್ನು ಮಾತ್ರ ಜೀವಂತವಾಗಿ ರಕ್ಷಿಸಲಾಗಿದೆ. ಕೊನೆಯ ವ್ಯಕ್ತಿ, ಲಾರಿ ಚಾಲಕ ರಾಜೇಂದ್ರನ್ ಭಾನುವಾರ (ಮೇ 22) ರಾತ್ರಿ ಶವವಾಗಿ ಪತ್ತೆಯಾಗಿದ್ದಾರೆ. ಈ ಪ್ರಕರಣದಲ್ಲಿ ಕ್ವಾರಿ ಮಾಲೀಕ ಸೆಲ್ವಂ ಹಾಗೂ ಆತನ ಪುತ್ರ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಕ್ವಾರಿಯಲ್ಲಿ ಸುಮಾರು 300 ಅಡಿ ಆಳಕ್ಕೆ ಬಂಡೆಗಳನ್ನು ಅಗೆದಿದ್ದರಿಂದ ಈ ಅವಘಡ ಸಂಭವಿಸಿದೆ. ಇದಲ್ಲದೇ, ಬಂಡೆಗಳನ್ನು ಅಗೆಯುವಾಗ ಯಾವುದೇ ಸುರಕ್ಷತಾ ನಿಯಮಗಳನ್ನು ಅನುಸರಿಸಲಾಗಿಲ್ಲ ಎಂಬುದಾಗಿ ತಿಳಿದು ಬಂದಿದೆ.
TAGGED:
ನೆಲ್ಲೈ ಕಲ್ಲು ಕ್ವಾರಿ ಅಪಘಾತ