ಕರ್ನಾಟಕ

karnataka

ETV Bharat / videos

ಶಾಸಕರಾದ್ರೇನು ಕ್ರೀಡಾ ಉತ್ಸಾಹ ಇರಬಾರದೇ.. ಸೆಡ್ಡು ಹೊಡೆದು ಕಬಡ್ಡಿ,ಕಬಡ್ಡಿ ಎಂದರು ಮುನೇನಕೊಪ್ಪ! - ಕುಸಗಲ್‌ ಕಬಡ್ಡಿ ಪಂದ್ಯ ಉದ್ಘಾಟನೆ

By

Published : Sep 29, 2019, 11:56 AM IST

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಾಳ ಕುಸಗಲ್‌ನಲ್ಲಿ ನಡೆದ‌ ಕಬಡ್ಡಿ ಪಂದ್ಯ ಉದ್ಘಾಟನೆ ವೇಳೆ ನವಲಗುಂದ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಕಬಡ್ಡಿ ಆಡಿ ಗಮನ ಸೆಳೆದಿದ್ದಾರೆ. ದಸರಾ ಪ್ರಯುಕ್ತ ಆಯೋಜಿಸಿರುವ ಕಬಡ್ಡಿ ಪಂದ್ಯಾವಳಿಯಲ್ಲಿ ಶಾಸಕ ಮುನೇನಕೊಪ್ಪ ಒಟ್ಟು ಮೂರು ಅಂಕ ಗಳಿಸಿ ಸಂಭ್ರಮಿಸಿದರು. ಶಾಸಕನಾದರೂ ಆಡೋರನ್ನ ನೋಡಿ ತಡೆಯದ ಕ್ರೀಡಾಪಟುವಿನ ಮನಸು ಅಂಗಣಕ್ಕಿಳಿದಿತ್ತು. ಕಬಡ್ಡಿ ಕಬಡ್ಡಿ ಅಂತಾ ಆಡಿ ಖುಷಿಪಟ್ಟ ಶಾಸಕ ಶಂಕರಪಾಟೀಲ್ ಮುನೇನಕೊಪ್ಪನವರ ಕಂಡ ನೆರೆದಿದ್ದ ಜನ ಕೇಕೆ ಹಾಕಿ ಖುಷಿಪಟ್ಟರು. ಎಲ್ಲ ಹಮ್ಮುಬಿಮ್ಮುಬಿಟ್ಟು ಆಡೋರ ಜತೆಗೆ ತಾವೂ ಆಡಿ ಖುಷಿಪಟ್ಟರು ಶಾಸಕರು.

ABOUT THE AUTHOR

...view details