ಪ್ರಾಂಕ್ ವಿಡಿಯೋ ಹೆಸರಲ್ಲಿ ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ... ವಿಡಿಯೋ - ಆಂಧ್ರಪ್ರದೇಶ ಪ್ರಾಂಕ್ ವಿಡಿಯೋ
ಚಿತ್ತೂರು(ಆಂಧ್ರಪ್ರದೇಶ): ಪ್ರಾಂಕ್ ವಿಡಿಯೋ ಹೆಸರಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದ ಯುವಕನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುಡಿಯಾಟ್ಟಂ ರಸ್ತೆಯಲ್ಲಿ ಮ್ಯಾಸ್ಕಾಟ್ ವೇಷಭೂಷಣ ಧರಿಸಿ, ಹುಡುಗಿಯರ ಕೈಹಿಡಿದು ಎಳೆದುಕೊಂಡು ಹೋಗುತ್ತಿದ್ದನು. ಜೊತೆಗೆ ಅವರೊಂದಿಗೆ ಅನುಚಿತವಾಗಿ ವರ್ತನೆ ಮಾಡುತ್ತಿದ್ದ. ಇದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ದೂರಿನ ಮೇರೆಗೆ ಯವಕನನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನ ಸೈಯದ್ ಕರಿಮುಲ್ಲಾ(21) ಎಂದು ಗುರುತಿಸಲಾಗಿದೆ.